ಶೇಷಾದ್ರಿಪುರಂ ಕಾಲೇಜಿನ ಕನ್ನಡ ವಿಭಾಗಕ್ಕೆ ಸುಧೀರ್ಘವಾದ ಇತಿಹಾಸವಿದೆ.ಕನ್ನಡ ವಿಭಾಗದ ಎಲ್ಲ ಚಟುವಟಿಕೆ ಹಾಗೂ ಕಾರ್ಯಕ್ರಮಗಳನ್ನು "ಕನ್ನಡ ಸಂಘ"ದ ಅಡಿಯಲ್ಲಿ ಆಯೋಜಿಸಲಾಗುತ್ತದೆ . ಕನ್ನಡ ಸಂಘವು ಇದುವರೆಗೆ 29 ಮೌಲಿಕ ಕೃತಿಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ವಲಯದಲ್ಲಿ ಛಾಪು ಮೂಡಿಸಿದೆ, ಕನ್ನಡ ವಿಭಾಗದ ಹಿಂದಿನ ಮುಖ್ಯಸ್ಥರಾಗಿದ್ದ ಪ್ರೊ. ಎಂ.ವಿ ಸತ್ಯನಾರಾಯಣ್, ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಪ್ರೊ. ಎನ್ ಬೈರೇಗೌಡ,ಡಾ.ನಾ ಗೀತಾಚಾರ್ಯ ಪ್ರೊ.ಎನ್.ಎಸ್ ಸತೀಶ್ ಅವರುಗಳು ಸಮರ್ಥವಾಗಿ ವಿಭಾಗವನ್ನು ಮುನ್ನಡೆಸಿದ್ದಾರೆ, ಹಾಗೂ ಪ್ರಕಟಣೆಗಳಾದ ಕೃತಿಗಳು ಸಾಹಿತ್ಯ ವಲಯದಲ್ಲಿ ಸಾಹಿತಿಗಳು- ವಿದ್ವಾಂಸರ ಮೆಚ್ಚುಗೆಯನ್ನು ಪಡೆದಿದೆ. ಇಂದಿನ ಆಧುನಿಕತೆಯ ಅಬ್ಬರದ ನಡುವೆ ಯಾಂತ್ರಿಕವಾಗುತ್ತಿರುವ ವಿದ್ಯಾರ್ಥಿಗಳ ಮನಸ್ಸಿಗೆ ಕನ್ನಡ ಸಾಹಿತ್ಯದ ಎಲ್ಲಾ ಆಯಾಮಗಳ ಪರಿಚಯವನ್ನು ಕನ್ನಡ ಸಂಘವು ಮಾಡಿಕೊಡುತ್ತಿದೆ. ಸಾಹಿತ್ಯಿಕ ಸ್ಪರ್ಧೆಗಳು, ಉಪನ್ಯಾಸ, ಕಮ್ಮಟ, ಪ್ರಕಟಣೆಗಳು, ವಿದ್ಯಾರ್ಥಿಗಳಿಂದಲೇ ತಯಾರಾಗುವ ಶಶಾಂಕ ಗೋಡೆ ಪತ್ರಿಕೆ, ಕನ್ನಡದ ಇ ಬ್ಲಾಕ್, ಮುಂತಾದ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.ಕನ್ನಡ ಭಾಷೆಯ ಬಗೆಗೆ ಇನ್ನಷ್ಟು ಒಲವು, ಆಸಕ್ತಿನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲಾಗುತ್ತಿದೆ. ಆ ಮೂಲಕ ವಿದ್ಯಾರ್ಥಿಗಳು ಸಾಹಿತ್ಯದ ಮುಂದಿನ ರೂವಾರಿಗಳ ಆಗಬೇಕೆಂಬುದೇ ನಮ್ಮ ಆಂಬೊಣ.
ಪ್ರತಿಯೊಬ್ಬ ವ್ಯಕ್ತಿಯು ಜ್ಞಾನ ಹಾಗೂ ಆತ್ಮವಿಶ್ವಾಸ ಪಡೆಯುವ ಮೂಲಕ ಸದೃಢವಾಗುವಂತೆ ಮಾಡುವುದು; ಧೀಮಂತ ಚೇತನವಾಗಿ ರೂಪು ಗೊಳ್ಳುವಂತೆ ಪ್ರೇರೇಪಿಸುವುದು.
ನಮ್ಮ ವಿದ್ಯಾರ್ಥಿಗಳು ಬೌದ್ಧಿಕವಾಗಿ ಸದಾ ಜೀವಂತವಾಗಿದ್ದು, ನೈತಿಕವಾಗಿ ಹಾಗೂ ಸಾಮಾಜಿಕ ಜವಾಬ್ದಾರಿಯೊಂದಿಗೆ ಬದುಕನ್ನು ಪ್ರೀತಿಸಬೇಕು. ಸರ್ವತೋಮುಖ ಉನ್ನತಿಯ ಬಗ್ಗೆ ಮನಸ್ಸು ಸದಾ ತುಡಿಯುತ್ತಿರಬೇಕು.